ಟೊಮೇಟೊ ಸೂಪ್ ಮುಖ್ಯ ಘಟಕಾಂಶವಾಗಿ ಟೊಮೇಟೊಗಳಿಂದ ತಯಾರಿಸಲ್ಪಡುವ ಒಂದು ಸೂಪ್ ಆಗಿದೆ. ಇದನ್ನು ಬಿಸಿಯಾಗಿ ಅಥವಾ ತಣ್ಣಗೆ ಬೋಗುಣಿಯಲ್ಲಿ ಬಡಿಸಬಹುದು. ಇದನ್ನು ವಿವಿಧ ರೀತಿಗಳಲ್ಲಿ ತಯಾರಿಸಬಹುದು. ಇದು ನೋಡಲು ರೂಪದಲ್ಲಿ ನಯವಾಗಿರಬಹುದು, ಮತ್ತು ಟೊಮೇಟೊ ತುಂಡುಗಳು, ಕೆನೆ, ಕೋಳಿಮಾಂಸ ಅಥವಾ ತರಕಾರಿಯ ಬ್ರಾತ್, ಶ್ಯಾವಿಗೆ, ಇತರ ತರಕಾರಿಗಳ ತುಂಡುಗಳು ಮತ್ತು ಮಾಂಸದುಂಡೆಗಳನ್ನು ಒಳಗೊಳ್ಳುವ ಪಾಕವಿಧಾನಗಳೂ ಇವೆ. ಟೊಮೇಟೊ ಸೂಪ್‍ನ ಜನಪ್ರಿಯ ಅಲಂಕಾರದ ಹರಹುಗಳಲ್ಲಿ ಹುಳಿ ಕೆನೆ ಅಥವಾ ಕ್ರೂಟಾನ್‍ಗಳು ಸೇರಿವೆ. ಅಮೇರಿಕದಲ್ಲಿ, ಈ ಸೂಪ್‍ನ್ನು ಆಗಾಗ್ಗೆ ಕ್ರ್ಯಾಕರ್‌ಗಳು ಮತ್ತು ಗ್ರಿಲ್ ಮಾಡಿದ ಚೀಜ಼್ ಸ್ಯಾಂಡ್‍ವಿಚ್‍ನೊಂದಿಗೆ ಬಡಿಸಲಾಗುತ್ತದೆ. ಕ್ರ್ಯಾಕರ್‌ಗಳನ್ನು ಬಡಿಸುವವನು ಸೂಪ್‍ನ ಮೇಲೆ ಚೂರು ಚೂರು ಮಾಡಿ ಹಾಕಬಹುದು. ಟೊಮೇಟೊ ಸೂಪ್ ಪೋಲಂಡ್ ಮತ್ತು ಅಮೇರಿಕದಲ್ಲಿನ ಅಗ್ರ ತೃಪ್ತಿದಾಯಕ ಆಹಾರಗಳಲ್ಲಿ ಒಂದಾಗಿದೆ. ಟೊಮೇಟೊಗಳನ್ನು ಕುದಿನೀರಿನಲ್ಲಿ ಮುಳುಗಿಸಿ, ಸಿಪ್ಪೆಯನ್ನು ತೆಗೆದು, ನಂತರ ತಿಳ್ಳಿನ ರೂಪ ಬರಲು ಚೂರು ಮಾಡಲಾಗುತ್ತದೆ. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == 2011-12-29 ವೇಬ್ಯಾಕ್ ಮೆಷಿನ್ ನಲ್ಲಿ. - -